Licensing tutorial/kn

From Meta, a Wikimedia project coordination wiki
Preview of the original artwork (in English)
  • ವಿಕಿಮೀಡಿಯ ಕಾಮನ್ಸ್‌‌ನಲ್ಲಿ ಸಂಪಾದಿಸುವಾಗ ಬೇಕಾಗುವ ಕೆಲವು ಉಪಯುಕ್ತ ಮಾಹಿತಿಗಳು
  • ನೀವೇ ಸಂಪೂರ್ಣವಾಗಿ ಸಂಪಾದಿಸಿದ ಕೃತಿಯನ್ನು ಅಪ್ಲೋಡ್ ಮಾಡಬಹುದು.
    • ಇದು ಈ ಕೆಳಕಂಡವುಗಳ ಛಾಯಾಚಿತ್ರ ಮತ್ತು ದೃಶ್ಯಾವಳಿ ಆಗಿರಬಹುದು:
      • ಪ್ರಾಕೃತಿಕ ದೃಶ್ಯಗಳು, ಪ್ರಾಣಿಗಳು, ಸಸ್ಯಗಳು.
      • ಜನಪ್ರಿಯ ವ್ಯಕ್ತಿಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ತೆಗೆದ ವ್ಯಕ್ತಿಚಿತ್ರಗಳು.
      • ಉಪಯುಕ್ತ ಅಥವಾ ಕಲಾತ್ಮಕವಲ್ಲದ ವಸ್ತುಗಳು
    • ಮೂಲ ರೇಖಾಚಿತ್ರಗಳು, ಭೂಪಟಗಳು, ರೇಖಾಕೃತಿಗಳು ಮತ್ತು ಧ್ವನಿ
    • ನೆನಪಿನಲ್ಲಿಡಿ: ವಿಕಿಮೀಡಿಯ ಕಾಮನ್ಸ್‌ನಲ್ಲಿ ನಿಮ್ಮ ಕೃತಿಯನ್ನು ಹಂಚಿಕೊಳ್ಳುವುದರ ಮೂಲಕ, ನಿಮಗೆ ತಿಳಿಸದೆಯೇ ಯಾರು ಬೇಕಾದರು ಅದನ್ನು ಉಪಯೋಗಿಸಿಕೊಳ್ಳುವ, ನಕಲು, ಬದಲು, ಹಾಗೂ ಮಾರಲು ಅನುಮತಿಯನ್ನು ನೀಡುತ್ತೀರಿ.
  • ನಾವು ಇನ್ನೊಬ್ಬರಿಂದ ಸೃಷ್ಟಿಸಲ್ಪಟ್ಟ ಅಥವಾ ಪ್ರೇರಿತವಾದ ಕೃತಿಗಳನ್ನು ಸ್ವೀಕರಿಸುವುದಿಲ್ಲ
    • ಮೊದಲೇ ಹೇಳಿದಂತೆ, ನೀವು ಮತ್ತೊಬ್ಬರ ಕೃತಿಯನ್ನು ಅಪ್ಲೋಡ್ ಮಾಡುವಂತಿಲ್ಲ.
    • ಕೆಳಕಂಡಿರುವ ವಿಷಯಗಳನ್ನು ಒಳಗೊಂಡಂತೆ:
      • ಲೋಗೋಗಳು
      • ಸಿಡಿ / ಡಿವಿಡಿ ಹೊದಿಕೆಗಳು
      • ಜಾಹೀರಾತು ಚಿತ್ರಗಳು
      • ದೂರದರ್ಶನ ಕಾರ್ಯಕ್ರಮಗಳ, ಚಲನಚಿತ್ರಗಳ, ಡಿವಿಡಿಗಳ ಮತ್ತು ಅನ್ವಯಿಕಗಳ ತೆರೆಚಿತ್ರಗಳು
      • ದೂರದರ್ಶನ, ಹಾಸ್ಯಚಿತ್ರಗಳ ಅಥವಾ ಚಲನಚಿತ್ರಗಳ ರೇಖಾಚಿತ್ರಗಳು - ನೀವೇ ಅದನ್ನು ಬರೆದಿದ್ದರೂ ಕೂಡ
      • ಅಂತರಜಾಲದಲ್ಲಿ ಪ್ರಕಟಿಸಲಾದ ಬಹಳಷ್ಟು ಚಿತ್ರಗಳು.
  • ... ಎರಡು ಮುಖ್ಯ ವಿನಾಯಿತಿಗಳೊಂದಿಗೆ:
    • ಕೃತಿಯನ್ನು ಯಾರುಬೇಕಾದರೂ ಉಪಯೋಗಿಸಿಕೊಳ್ಳಲು, ನಕಲಿಸಲು, ಬದಲಿಸಲು ಮತ್ತು ಮಾರಲು ಅನುಮತಿಯನ್ನು ಮೂಲ ಕರ್ತೃವು ನೀಡಿದ್ದಲ್ಲಿ, ಅದನ್ನು ಅಪ್ಲೋಡ್ ಮಾಡಬಹುದು.
    • ಹಳೆಯ ಕಲೆ, ಶಿಲ್ಪ, ಮತ್ತು ಕಟ್ಟಡಗಳ ಛಾಯಾಚಿತ್ರಗಳನ್ನು ನೀವು ತೆಗೆದಿದ್ದಲ್ಲಿ ಅಪ್ಲೋಡ್ ಮಾಡಬಹುದು (ಸಾಮಾನ್ಯವಾಗಿ ೧೫೦ ವರ್ಷಗಳಿಗೂ ಹಳೆಯದಾದವು).
  • ಅಂತಿಮವಾಗಿ...
    • ನೀವು ನಿಮ್ಮ ಸ್ವಂತ ಕೃತಿಯನ್ನು ಅಪ್ಲೋಡ್ ಮಾಡಬಹುದು.
    • ನಿಮ್ಮ ಸಹಾಯಕ್ಕೆ ಧನ್ಯವಾದಗಳು; ಇದು ಮುಖ್ಯವಾದದ್ದು.
    • ನಾವು ಇತರರ ಕೃತಿಗಳನ್ನು ಸ್ವಷ್ಟ ಅನುಮತಿ ಇಲ್ಲದೆ ಬೇರೆಯವರಿಂದ ಪಡೆದುಕೊಳ್ಳುವಂತಿಲ್ಲ.
  • ಇನ್ನೂ ಸಂಶಯವಿದೆಯೇ? ಸಹಾಯ ವಿಭಾಗವನ್ನು ಸಂಪರ್ಕಿಸಿ.
  • ಸರಿ
  • ನಿಲ್ಲಿ
  • ಸರಿ
  • ನಿಲ್ಲಿ