ತಾಂತ್ರಿಕ/ಸುದ್ದಿ/೨೦೨೩/೧೦
Jump to navigation
Jump to search
ನಿಮ್ಮ ಮತ್ತು ನಿಮ್ಮ ಸಹವರ್ತಿ ವಿಕಿಮೀಡಿಯನ್ನರ ಮೇಲೆ ಪರಿಣಾಮ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಟೆಕ್ ನ್ಯೂಸ್ ಸಾಪ್ತಾಹಿಕ ಸಾರಾಂಶಗಳು ನಿಮಗೆ ಸಹಾಯ ಮಾಡುತ್ತವೆ. ಸೂಚನೆ ಪಡೆಯಿರಿ, ಕೊಡುಗೆ ನೀಡಿ ಮತ್ತು ಸಲಹೆ ನೀಡಿ.
ಹಿಂದಿನ | ೨೦೨೩, ವಾರ ೧೦ (ಸೋಮವಾರ ೦೬ ಮಾರ್ಚ್ ೨೦೨೩) | ಮುಂದಿನ |
ತಾಂತ್ರಿಕ ಸುದ್ದಿ: 2023-10
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನಿಮಗೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಇತ್ತೀಚಿನ ಬದಲಾವಣೆಗಳು
- ಸಮುದಾಯ ಬಯಕೆಪಟ್ಟಿ ಸಮೀಕ್ಷೆ 2023 ಆವೃತ್ತಿಯನ್ನು ಮುಕ್ತಾಯಗೊಳಿಸಲಾಗಿದೆ. ಸಮುದಾಯ ತಾಂತ್ರಿಕ ಸಮೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿದೆ ಮತ್ತು ಏಪ್ರಿಲ್ 2023 ರಲ್ಲಿ ಮುಂದಿನ ಕ್ರಮ ಪ್ರಸ್ತುತಪಡಿಸಲಾಗುವುದು.
- ಬಹು ಬರವಣಿಗೆ ವ್ಯವಸ್ಥೆಗಳನ್ನು ನಿರ್ವಹಿಸಲು LanguageConverter ಬಳಸುವ ವಿಕಿಗಳಲ್ಲಿ, ವಿಕಿಟೆಕ್ಸ್ಟ್ನಲ್ಲಿ (ಪ್ರಾಥಮಿಕವಾಗಿ ಚೈನೀಸ್ ವಿಕಿಪೀಡಿಯಾದಲ್ಲಿ) ಕಸ್ಟಮ್ ಪರಿವರ್ತನೆ ನಿಯಮಗಳನ್ನು ಬಳಸಿದ ಲೇಖನಗಳು ಈ ನಿಯಮಗಳನ್ನು ವಿಷಯಗಳ ಕೋಷ್ಟಕದಲ್ಲಿ ಅಸಮಂಜಸವಾಗಿರುತ್ತಿತ್ತು, ವಿಶೇಷವಾಗಿ ವೆಕ್ಟರ್ 2022 ಸ್ಕಿನ್ ನಲ್ಲಿ. ಇದನ್ನು ಈಗ ಸರಿಪಡಿಸಲಾಗಿದೆ. [೧]
ಈ ವಾರದ ಮುಂದಿನ ಬದಲಾವಣೆಗಳು
ಮೀಡಿಯಾವಿಕಿ ಹೊಸ ಆವೃತ್ತಿ ೭ ಮಾರ್ಚ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೮ ಮಾರ್ಚ್ ದಿಂದ ವಿಕಿಪೀಡಿಯವಲ್ಲದ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೯ ಮಾರ್ಚ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳಲ್ಲಿ ಸೇರಿಸಲಾಗುವುದು.
- ಪ್ರಾಶಸ್ತ್ಯಗಳ ಪರದೆಗೆ ಹುಡುಕಾಟ ವ್ಯವಸ್ಥೆಯನ್ನು ಸೇರಿಸಲಾಗಿದೆ. ಇದು ವಿಭಿನ್ನ ಆಯ್ಕೆಗಳನ್ನು ಹೆಚ್ಚು ಸುಲಭವಾಗಿ ಹುಡುಕಲು ನಿಮಗೆ ಅನುಮತಿಸುತ್ತದೆ. ಶೀಘ್ರದಲ್ಲೇ ಮೊಬೈಲ್ ಸಾಧನಗಳಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲಾಗುವುದು. [೨]
ಟೆಕ್ ಸುದ್ದಿಯನ್ನು ಬರಹಗಾರರ ಮೂಲಕ ಸಿದ್ಧಪಡಿಸಲಾಗಿದೆ ಮತ್ತು ಬಾಟ್ ಮೂಲಕ ಪೋಸ್ಟ್ ಮಾಡಲಾಗಿದೆ • ಕೊಡುಗೆ ನೀಡಿ • ಭಾಷಾಂತರ ಮಾಡಿ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಸುದ್ದಿ ಪಟ್ಟಿ ಪರಿಶೀಲಿಸಿ.