Wikimedia Education SAARC conference/Submissions/Experince on Wikipedia Education program at St. Aloysius College Mangalore
- Submission no.
- Title of the submission
- Experince on Wikipedia Education program at St. Aloysius College Mangalore
- Experince on Wikipedia Education program
- Author(s) of the submission
- Name : Dr Vishwanatha Badikana
- Wiki user name Vishwanatha Badikana
- E-mail address
- badikana65@gmail.com
- City of origin
Mangaluru, Costal Karnataka, India
- Affiliation, if any (organisation, company etc.)
President, Karavali Wikimedians User Group
- Main theme
- Type of session
- Wikipedia Education Program
Lightning talk (5 min)
- Paper Presentations
- Presentation
- Length of session
- 10 Minutes
- Do you want to submit a paper for peer-reviewing?
- No
- Abstract
ಕರ್ನಾಟಕ ರಾಜ್ಯದ ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ನಗರದ ಪ್ರಮುಖ ಕಾಲೇಜುಗಳಲ್ಲೊಂದಾದ ಸಂತ ಅಲೋಶಿಯಸ್ ಕಾಲೇಜು 137 ವರ್ಷಗಳನ್ನು ಪೂರೈಸುತ್ತಿದೆ. ಈ ಅವಧಿಯಲ್ಲಿ ಕಾಲೇಜು ಪದವಿ ಮತ್ತು ಸ್ನಾತಕೋತ್ತರ ಪದವಿಯ ಹಲವಾರು ಶಾಖೆಗಳನ್ನು ಹೊಂದಿದ್ದು, ಅವುಗಳಲ್ಲಿ ಕನ್ನಡ ಭಾಷಾ ವಿಭಾಗವು ಮುಳಿಯ ತಿಮ್ಮಪ್ಪಯರಂತಹ ಶ್ರೇಷ್ಠ ವಿದ್ವಾಂಸರನ್ನು ಕಂಡಿದೆ. ಈ ವಿಭಾಗವು ಕಳೆದ 2014ನೇ ವರ್ಷದಿಂದ ಕನ್ನಡ ಭಾಷೆ ಮತ್ತು ಐಚ್ಛಿಕ ವಿದ್ಯಾರ್ಥಿಗಳಿಗೆ ವಿಶೇಷವಾದ ಯೋಜನೆಯನ್ನು ರೂಪಿಸುವ ಉದ್ದೇಶವನ್ನು ಇರಿಸಿಕೊಂಡಿದೆ.
ವಿಕಿಮೀಡಿಯ ಫೌಂಡೇಶನ್ ನಿಂದ ಪಡೆದಿರುವ ಗ್ರಾಂಟ್
[edit]- ಕನ್ನಡ ವಿಕಿಪೀಡಿಯ ಹದಿಮೂರನೆಯ ವರ್ಷಾಚರಣೆ - 14 ಫೆಬ್ರವರಿ 2016
- ಕನ್ನಡ ವಿಕಿಪೀಡಿಯ ಶಿಕ್ಷಣ ಯೋಜನೆ ತರಬೇತಿ ಮತ್ತು ಸಮಾವೇಶ - 9 ಮತ್ತು 10 ಫೆಬ್ರವರಿ 2019
2014-15ರಿಂದ ಕನ್ನಡ ವಿಕಿಪೀಡಿಯ ಶಿಕ್ಷಣ ಯೋಜನೆಯನ್ನು ಸಂತ ಅಲೋಶಿಯಸ್ ಕಾಲೇಜು, ಮಂಗಳೂರು ನಡೆಸುತ್ತಾ ಬಂದಿದೆ. ಮುಂದಿನ ಶೈಕ್ಷಣಿಕ ವರ್ಷ 2019-20ರಿಂದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮೂರು ಹೊಸ ಕ್ಷೇತ್ರಗಳಲ್ಲಿ ವಿಕಿಪೀಡಿಯ ಯೋಜನೆಯನ್ನು ನಡೆಸಲು ಕಾಲೇಜಿನ ಕನ್ನಡ ವಿಭಾಗ ನಿರ್ಧರಿಸಿದೆ. ಅವುಗಳು;
- ವಿಕಿಪೀಡಿಯ ಶಿಕ್ಷಣ ಯೋಜನೆ
- ವಿಕಿಪೀಡಿಯ ಅಸೋಶಿಯೇಶನ್
- ವಿಕಿಪೀಡಿಯ ಸರ್ಟಿಫಿಕೇಟ್ ಕೋರ್ಸ್
ಕನ್ನಡ ವಿಭಾಗವು ಹಮ್ಮಿಕೊಂಡಿರುವ ಕಾರ್ಯಚಟುವಟಿಕೆಗಳು
[edit]ಕರಾವಳಿ ವಿಕಿಮೀಡಿಯನ್ಸ್ ಯೂಸರ್ ಗ್ರೂಪ್ ಜೊತೆಗೂಡಿ ಮಂಗಳೂರಿನಲ್ಲಿ ಎರಡು ದಿನಗಳ ವಿಕಿಪೀಡಿಯ ಶಿಕ್ಷಣ ಯೋಜನೆ:ಕಾನ್ಪರೆನ್ಸ್ ಮತ್ತು ಟ್ರೈನಿಂಗ್ ನಡೆಸಲಾಗಿದೆ. ಈ ಎರಡು ದಿನಗಳಲ್ಲಿ ಆಸಕ್ತ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ತರಬೇತಿ ಪಡೆದು, ಅವರು ಮುಂದಿನ ಹಂತದಲ್ಲಿ ಇಂತಹದ್ದೇ ರಾಪಿಡ್ ಗ್ರಾಂಟ್‌ಗೆ ಅರ್ಹರಾಗುವಂತೆ ಮಾರ್ಗದರ್ಶನ ನೀಡಲಾಗಿದೆ.
- ವಿಕಿಪೀಡಿಯ ಶಿಕ್ಷಣ ಯೋಜನೆಯ ಉದ್ದೇಶ : ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿ ಶಿಕ್ಷಣ ಯೋಜನೆಯನ್ನು ಮಾಡಲು ಸಾಧ್ಯವಿಲ್ಲ ಮತ್ತು ಅದರ ಅಗತ್ಯವೂ ಇಲ್ಲ. ಯಾಕೆಂದರೆ ಆಸಕ್ತ ಕೆಲವೇ ವಿದ್ಯಾರ್ಥಿಗಳಿಗೆ ಮಾತ್ರ ಈ ಯೋಜನೆಯನ್ನು ವಿಸ್ತರಿಸಲಾಗಿದೆ.
- ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸರ್ವತೋಮುಕವಾಗಿ ಬೆಳೆಯಬೇಕಾದರೆ ಅವರ ಕಲಿಕೆಯ
ಜೊತೆಗೆ ವಿವಿಧ ಭಾಷೆಯ ‘ತಂತ್ರಜ್ಞಾನ’ವನ್ನು ಪ್ರತ್ಯೇಕವಾಗಿ ಕಲಿಯುವ ಅವಕಾಶದ ಕಡೆಗೆ ಗಮನ ನೀಡುವುದು.
- ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಓದಿನೊಂದಿಗೆ ಸಂಶೊಧನಾ ಚಟುವಟಿಕೆಯನ್ನು ಬೆಳೆಸಿಕೊಳ್ಳುವುದು.
- ವಿಕಿಪೀಡಿಯ ಅಸೋಶಿಯೇಶನ್ ಉದ್ದೇಶ: ಪದವಿ ವಿದ್ಯಾರ್ಥಿಗಳು ಸಿಬಿಸಿಎಸ್ ಪಠ್ಯಕ್ರಮಕ್ಕೆ ಪರಿವರ್ತನೆಯಾಗುವ ಈ ವರ್ಷ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಉ ಮಾತ್ರ ಅಸೋಶಿಯೇಶನ್ ವ್ಯಾಪ್ತಿಗೆ ಬರುತ್ತಾರೆ. ಮುಂದಿನ ವರ್ಷದಿಂದ ಪ್ರಥಮ ಮತ್ತು ದ್ವಿತೀಯ ವರ್ಷದ 50 ವಿದ್ಯಾರ್ಥಿಗಳಿಗೆ ಅಸೋಶಿಯೇಶನ್ ಮುಂದುವರಿಯುತ್ತದೆ. ಪ್ರತೀ ಸೆಮಿಸ್ಟರ್ 50 ಅಂಕಗಳಂತೆ ನಾಲ್ಕು ಸೆಮಿಸ್ಟರ್ ಈ ಯೋಜನೆ ಮುಂದುವರಿಯುತ್ತದೆ. ಇಲ್ಲಿ ವಿದ್ಯಾರ್ಥಿಗಳು ಆಸಕ್ತಿ ಇದ್ದರೂ ಇಲ್ಲದಿದ್ದರೂ ಭಾಗವಹಿಸಬೇಕಾಗುತ್ತದೆ. ಕಾಲೇಜಿನಲ್ಲಿ ಇಂಗ್ಲಿಷ್, ಹಿಂದಿ, ಕನ್ನಡ, ಮಲಯಾಳಿ, ಸಂಸ್ಕೃತ, ಕೊಂಕಣಿ, ಫ್ರೆಂಚ್ ಮತ್ತು ತುಳು ಭಾಷೆಯಲ್ಲಿ ಲೇಖನಗಳನ್ನು ಬರೆಯುವ ಸಾಮರ್ಥ್ಯವಿರುವವರಿಗೆ ಈ ಅಸೋಶಿಯೇಶನ್ ಉಪಯೋಗವಾಗುತ್ತದೆ.
- ವಿಕಿಪೀಡಿಯ ಸರ್ಟಿಫಿಕೇಟ್ ಕೋರ್ಸ್ ಉದ್ದೇಶ: ಪದವಿ ತರಗತಿಯ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕೌಸಲ್ಯವನ್ನೂ ಕಲಿತು ತಮ್ಮ ಮುಂದಿನ ಉದ್ಯೋಗಕ್ಕೆ ಅನುಕೂಲವಾಗಲೆಂದು ಈ ಕೋರ್ಸ್ ತಯಾರಾಗಿದೆ. ಅಸೋಶಿಯೇಶನ್ ಚಟುವಟಿಕೆಯ ವಿದ್ಯಾರ್ಥಿಗಳು ಸರ್ಟಿಫಿಕೇಟ್ ಕೋರ್ಸ್ ಲಾಭ ಪಡೆಯುತ್ತಾರೆ. ಅಥವಾ ಹೊಸ ವಿದ್ಯಾರ್ಥಿಗಳೂ ಈ ಕೋರ್ಸ್ ಲಾಭ ಪಡೆಯಬಹುದು.
ವಿಕಿಪೀಡಿಯ ಶಿಕ್ಷಣ ಯೋಜನೆಯ ಸ್ವರೂಪ
[edit]- ಮೊದಲ ಚತುರ್ಮಾಸದ ವಿದ್ಯಾಥಿಗಳು ವಿಕಿಪೀಡಿಯಕ್ಕೆ ಲಾಗಿನ್ ಆಗುವುದು ಮತ್ತು ಅವರನ್ನು ಪರಿಚಯಿಸಿಕೊಳ್ಳುವುದು.
- ಎರಡನೆಯ ಚತುರ್ಮಾಸದ ವಿದ್ಯಾರ್ಥಿಗಳು ಸ್ಯಾಂಡ್ ಬಾಕ್ಸ್ ನಲ್ಲಿ ಲೇಖನಗಳನ್ನು ಬರೆಯುವುದು.
- ಮೂರನೆಯ ಚತುರ್ಮಾಸದ ವಿದ್ಯಾರ್ಥಿಗಳು ಸ್ಯಾಂಡ್ ಬಾಕ್ಸ್ ನಲ್ಲಿ ಲೇಖನಗಳನ್ನು ಬರೆದು ಉತ್ತಮವೆಂದು ಕಂಡುಬಂದರೆ ಆ ಲೇಖನಗಳನ್ನು ಪ್ರಾಧ್ಯಾಪಕರ ಸಲಹೆಯಂತೆ ಪ್ರಕಟಿಸುವುದು.
- ನಾಲ್ಕನೆಯ ಚರ್ತುಮಾಸದಲ್ಲಿ ಉತ್ತಮ ಲೇಖನ ಬರೆಯುವವರನ್ನು ಗುರುತಿಸಿ ವಿಕಿಪೀಡಿಯನ್ನರಾಗಿ ಬೆಳೆಸುವುದು.
ವಿಕಿಪೀಡಿಯ ಶಿಕ್ಷಣ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಲಾಭ
[edit]- ವಿದ್ಯಾರ್ಥಿಗಳ ಕಂಪ್ಯೂಟರ್ ಜ್ಞಾನ ಬೆಳೆಯುತ್ತದೆ.
- ಕಂಪ್ಯೂಟರ್ನಲ್ಲಿ ಕನ್ನಡವನ್ನೂ ಊಡಿಸುವುದರಲ್ಲಿ(ಟೈಪ್ ಮಾಡುವುದು) ಪರಿಣತಿ ಬರುತ್ತದೆ. ಕಂಪ್ಯೂಟರ್ ಒಳಗೆ ಪ್ರವೇಶ ಮಾಡಿ ಕನ್ನಡ ತಂತ್ರಾಂಶವನ್ನು ಬಳಸಿ ಟೈಪಿಂಗ್ ತಿಳಿಯುತ್ತದೆ. ಕನ್ನಡ ನುಡಿ ಅಥವಾ ಲಿಪ್ಯಂತರ/ಬರಹದಲ್ಲಿ ಟೈಪ್ ಮಾಡಲು ಸುಲಭವಾಗಿ ಅಭ್ಯಾಸವಾಗುತ್ತದೆ.
- ಯಾವುದೇ ಮಾಹಿತಿಯನ್ನು ಸಂಗ್ರಹಿಸುವ ಅಥವಾ ಬೇರೆ ಭಾಷೆಯಿಂದ ಅನುವಾದಿಸುವ ಕಾರ್ಯ ಸುಲಭವಾಗಿ ಬರುತ್ತದೆ.
- ವಿದ್ಯಾರ್ಥಿಯ ಸಂಶೋಧನಾ ಕೌಶÀಲ್ಯ ಬೆಳೆಯುತ್ತದೆ.
- ಕನ್ನಡವನ್ನು ಜಾಗತಿಕ ಭಾಷೆಯಾಗಿ ಕೊಂಡೊಯ್ಯವ ಪ್ರಯತ್ನವಾಗುತ್ತದೆ.
- ಕನ್ನಡ ಭಾಷೆಯಲ್ಲಿ ಜ್ಞಾನಸಾಹಿತ್ಯ ಸೃಷ್ಟಿ ಮಾಡುವ ಮೂಲಕ ಭಾಷೆ ಬೆಳೆಯಲು ಸಹಾಯವಾಗುತ್ತದೆ.
- How does your proposal add knowledge to the international community in Wikimedia and education
- Who is the intended ideal audience for the topic?
- Kannada Teachers, Professors and Students
- Slides or further information
Interested attendees
[edit]If you are interested in attending this session, please sign with your username below. This will help reviewers to decide which sessions are of high interest. --Vishwanatha Badikana (talk) 13:11, 10 May 2019 (UTC)