ಚಳುವಳಿ ಚಾರ್ಟರ್/ದೃಢೀಕರಣ
ದೃಢೀಕರಣ
ಚಾರ್ಟರ್ಅನ್ನು ಅಂಗೀಕರಿಸಲಾಗಿದೆ ಮತ್ತು ಇದು ಈ ಕೆಳಗಿನ ಫಲಿತಾಂಶವನ್ನು ಹೊಂದಿರುವ ಮತದ ಮೂಲಕ ಜಾರಿಗೆ ಬರುತ್ತದೆ:
- ವಿಕಿಮೀಡಿಯಾ ಅಂಗಸಂಸ್ಥೆಯಲ್ಲಿ ಭಾಗವಹಿಸುವ ಬಹುಪಾಲು (೫೦% ಕ್ಕಿಂತ ಹೆಚ್ಚು) ಜನರು ಚಾರ್ಟರ್ಅನ್ನು ಬೆಂಬಲಿಸಲು ಮತ ಚಲಾಯಿಸುತ್ತಾರೆ,
- ಚಳುವಳಿ ಆಧಾರಿತ ಮತದಾರರಲ್ಲಿ ಬಹುಮತ (೫೦% ಕ್ಕಿಂತ ಹೆಚ್ಚು) ಜನರು ಚಾರ್ಟರ್ಅನ್ನು ಬೆಂಬಲಿಸಲು ಮತ ಚಲಾಯಿಸುತ್ತಾರೆ, ಮತ್ತು
- ವಿಕಿಮೀಡಿಯಾ ಫೌಂಡೇಶನ್ ಬೋರ್ಡ್ ಆಫ್ ಟ್ರಸ್ಟೀಸ್ ಚಾರ್ಟರ್ ಅನ್ನು ಬೆಂಬಲಿಸಲು ಮತ ಹಾಕುತ್ತದೆ.
ಈ ಚಾರ್ಟರ್ ನ ಅನುವಾದಗಳನ್ನು ಇತರ ಭಾಷೆಗಳಲ್ಲಿ ಒದಗಿಸಬಹುದು. ಯಾವುದೇ ಅನುವಾದ ಮತ್ತು ಮೂಲ ಇಂಗ್ಲಿಷ್ ಭಾಷೆಯ ಆವೃತ್ತಿಯ ನಡುವೆ ಅನುಮಾನ ಅಥವಾ ಸಂಘರ್ಷದ ಸಂದರ್ಭದಲ್ಲಿ, ಮೂಲ ಆವೃತ್ತಿಯು ಉಳಿಯುತ್ತದೆ.