Jump to content

ವಿಶ್ವಾಸ ಮತ್ತು ಸುರಕ್ಷತೆ/ಸಂಪನ್ಮೂಲಗಳು

From Meta, a Wikimedia project coordination wiki
 Trust & Safety Resources Programs and Processes 

ನಂಬಿಕೆ ಮತ್ತು ಸುರಕ್ಷಿತೆ ಸಂಸ್ಥೆಯು ಬೆಂಬಲಿಸುವ ಸ್ವಯಂಸೇವಕ ಸಮುದಾಯಗಳಿಗೆ ಸೇವೆ ಸಲ್ಲಿಸುತ್ತಿರುವ ಯೋಗಕ್ಷೇಮ ಮತ್ತು ಉತ್ತಮ ಅಭ್ಯಾಸಗಳಿಗೆ ಸಂಬಂಧಿಸಿದ ಸಾರ್ವಜನಿಕವಾಗಿ ಲಭ್ಯವಿರುವ ಸಂಪನ್ಮೂಲಗಳ ಶ್ರೇಣಿಯನ್ನು ನಿರ್ಮಿಸಿದೆ ಮತ್ತು ನಿರ್ವಹಿಸುತ್ತದೆ.

ತರಬೇತಿ ಘಟಕಗಳು

ತಂಡವು ನಂಬಿಕೆ ಮತ್ತು ಸುರಕ್ಷತೆ ಸಮಸ್ಯೆಗಳಿಗೆ ಮೀಸಲಾಗಿರುವ ಬಳಕೆದಾರರಿಗೆ ತರಬೇತಿ ಘಟಕಗಳ ಶ್ರೇಣಿಯನ್ನು ನಿರ್ಮಿಸುತ್ತದೆ ಮತ್ತು ನಿರ್ವಹಿಸುತ್ತದೆ. ಕಾರ್ಯಕಾರಿ ಮತ್ತು ಸಮುದಾಯ ಆಡಳಿತದ ಗುಂಪುಗಳು - ಮೇಲ್ವಿಚಾರಕರು, ನಿರ್ವಾಹಕರು, ಜಾಗತಿಕ ನಿರ್ವಾಹಕರು ಮತ್ತು ಮಧ್ಯಸ್ಥಿಕೆ ಸಮಿತಿಗಳು ಸೇರಿದಂತೆ - ನಮ್ಮ ಎಲ್ಲಾ ಸೈಟ್‌ಗಳಲ್ಲಿ ನಿರ್ಣಾಯಕ ಆಡಳಿತಾತ್ಮಕ ಮತ್ತು ಸಂಪಾದಕೀಯ ಪಾತ್ರವನ್ನು ವಹಿಸುತ್ತವೆ, ವಿಶೇಷವಾಗಿ ಸ್ವಯಂಸೇವಕರ ಕಿರುಕುಳವನ್ನು ಕಡಿಮೆ ಮಾಡುವುದು ಮತ್ತು ವಿವಾದಗಳನ್ನು ಮಧ್ಯಸ್ಥಿಕೆ ವಹಿಸುವುದು ಮತ್ತು ಪರಿಹರಿಸುವುದು. ಈ ಕಾರ್ಯಕಾರಿ ಮತ್ತು ಸಮುದಾಯ ಆಡಳಿತ ಗುಂಪುಗಳು ತಮ್ಮ ಕೆಲಸವನ್ನು ಉತ್ತಮವಾಗಿ ಸಂಘಟಿಸಲು ಸಹಾಯ ಮಾಡಲು, ನಾವು ತರಬೇತಿ ವೇದಿಕೆಯ ಅಭಿವೃದ್ಧಿಯಲ್ಲಿ ಸುಗಮಗೊಳಿಸಿದ್ದೇವೆ ಮತ್ತು ಕಿರುಕುಳವನ್ನು ಪರಿಹರಿಸುವ ನಿರ್ಣಾಯಕ ಪ್ರದೇಶದ ಸುತ್ತಲೂ ಘಟಕದ ಸ್ಥಾಪನೆಗೆ ಮಾರ್ಗದರ್ಶನ ನೀಡಿದ್ದೇವೆ. ನೀವು ಅವರ ಡ್ಯಾಶ್‌ಬೋರ್ಡ್ ನಲ್ಲಿ ಘಟಕಗಳನ್ನು ಪ್ರಯತ್ನಿಸಬಹುದು.

ಸಂಪನ್ಮೂಲ ಪುಟಗಳು

ಪ್ರಕರಣಗಳನ್ನು ನಿಭಾಯಿಸಲು ಉತ್ತಮ ಅಭ್ಯಾಸಗಳ ಬಗ್ಗೆ ಕಾರ್ಯಕರ್ತರಿಗೆ ತರಬೇತಿ ನೀಡಲು ಪೂರಕವಾಗಿ, ತಂಡವು ಸಮುದಾಯದ ಸದಸ್ಯರಿಗಾಗಿ ಸಂಪನ್ಮೂಲ ಪುಟಗಳನ್ನು ನಿರ್ಮಿಸಿದೆ, ಇದು ಈ ಕಷ್ಟಕರ ವಿಷಯಗಳನ್ನು ನ್ಯಾವಿಗೇಟ್ ಮಾಡಲು ಮತ್ತು ಸಂಭಾವ್ಯ ಸಹಾಯವನ್ನು ಪಡೆಯಲು ಜನರಿಗೆ ಸಹಾಯ ಮಾಡುತ್ತದೆ.