User:CKoerner (WMF)/Support for our communities across India/kn

From Meta, a Wikimedia project coordination wiki
This page is a translated version of the page User:CKoerner (WMF)/Support for our communities across India and the translation is 100% complete.

Please help translate to your language

ಭಾರತದಲ್ಲಿನ ನಮ್ಮ ಸಮುದಾಯಗಳಿಗೆ ಬೆಂಬಲ

ಎಲ್ಲರಿಗೂ ನಮಸ್ಕಾರ,

ವಿಕಿಮೀಡಿಯಾ ಯೋಜನೆಗಳು ನಡೆಯುವುದು ನಿಮ್ಮಿಂದ—ಜಗತ್ತಿನಾದ್ಯಂತ ಇರುವ ಸ್ವಯಂಸೇವಕರು, ಗುಂಪುಗಳು ಮತ್ತು ಸಂಸ್ಥೆಗಳ ಒಂದು ಜಾಲದಿಂದ. ನೀವೆಲ್ಲರೂ ಸೇರಿ ವಿಕಿಮೀಡಿಯಾ ಯೋಜನೆಗಳನ್ನು ಹಾಗೂ ಮುಕ್ತಜ್ಞಾನದ ಧ್ಯೇಯೋದ್ದೇಶವನ್ನು ಬೆಳೆಸುತ್ತೀರಿ, ಶ್ರೀಮಂತಗೊಳಿಸುತ್ತೀರಿ ಮತ್ತು ಮುನ್ನಡೆಸುತ್ತೀರಿ.

ವಿಕಿಮೀಡಿಯಾ-ಇಂಡಿಯಾದ ಅಂಗೀಕರಣವನ್ನು ರದ್ದು ಮಾಡುವ ಅಂಗಸಂಸ್ಥೆ ಸಮಿತಿಯ (Affiliations Committee / AffCom) ನಿರ್ಧಾರದ ಬಗ್ಗೆ ನೀವು ಕೇಳಿರಬಹುದು. ಭಾರತದ ವಿಕಿಮೀಡಿಯಾ ಸಮುದಾಯಗಳ ಮೇಲೆ ಇದರ ಪರಿಣಾಮದ ಬಗ್ಗೆ ಕೆಲವು ಸಮುದಾಯದ ಸದಸ್ಯರು ಕೇಳಿದ್ದಾರೆ. AffCom ನಿರ್ಧಾರದ ಕುರಿತು ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲು ನಾವು ಬಯಸುತ್ತೇವೆ ಮತ್ತು ಭಾರತದಾದ್ಯಂತದ ನಮ್ಮ ಅನೇಕ ಸಮುದಾಯಗಳಿಗೆ ನಮ್ಮ ಬದ್ಧತೆ ಮತ್ತು ಬೆಂಬಲವನ್ನು ಪುನರುಚ್ಚರಿಸುತ್ತೇವೆ.

ಅಫಿಲಿಯೇಷನ್ಸ್ ಕಮಿಟಿ (AffCom) ವಿಕಿಮೀಡಿಯಾ ಅಂಗಸಂಸ್ಥೆಗಳನ್ನು ಪ್ರತಿನಿಧಿಸುವ ಮತ್ತು ಬೆಂಬಲಿಸುವ ಸ್ವಯಂಸೇವಕರ ಸಮುದಾಯ-ನಡೆಸುವ ಸಂಸ್ಥೆ. ಅಧ್ಯಾಯದ ಅವಶ್ಯಕತೆಗಳಿಗೆ ಅನುಗುಣವಾಗಿ ತನ್ನ ಚಟುವಟಿಕೆಗಳನ್ನು ತರಲು ವಿಕಿಮೀಡಿಯಾ-ಇಂಡಿಯಾದೊಂದಿಗೆ ಹಲವಾರು ವರ್ಷಗಳ ಕಾಲ ಕೆಲಸ ಮಾಡಿದ ನಂತರ, ವಿಕಿಮೀಡಿಯಾ ಫೌಂಡೇಶನ್ ಅಧ್ಯಾಯ ಒಪ್ಪಂದವನ್ನು ನವೀಕರಿಸಬಾರದೆಂದು ಜೂನ್ 2019 ರಲ್ಲಿ AffCom ಶಿಫಾರಸು ಮಾಡಿತು.

ವಿಕಿಮೀಡಿಯಾ-ಇಂಡಿಯಾ ಮೊದಲ ಬಾರಿಗೆ 2011 ರಲ್ಲಿ ಒಂದು ಅಧ್ಯಾಯವಾಗಿ ಗುರುತಿಸಲಾಯಿತು. 2015 ರಲ್ಲಿ, ಇದು ಅಧ್ಯಾಯ ಒಪ್ಪಂದದ ಕಟ್ಟುಪಾಡುಗಳನ್ನು ಪೂರೈಸುವಲ್ಲಿ ತೊಂದರೆಗಳನ್ನು ಅನುಭವಿಸಿತು. ಅಫಿಲಿಯೇಷನ್ಸ್ ಕಮಿಟಿ ಮತ್ತು ಫೌಂಡೇಶನ್‌ನೊಂದಿಗೆ ಕೆಲಸ ಮಾಡುವ ಅಧ್ಯಾಯವು ಕ್ರಿಯಾಶೀಲ ಯೋಜನೆಯನ್ನು ಅಭಿವೃದ್ಧಿಪಡಿಸಿತು ಮತ್ತು 2017 ರ ಹೊತ್ತಿಗೆ ಉತ್ತಮ ಸ್ಥಿತಿಯಲಿೢತ್ತು. ಆದಾಗ್ಯೂ, 2017 ಮತ್ತು 2019 ರ ನಡುವೆ ಅಧ್ಯಾಯವು ವಿಶ್ವಾಸಾರ್ಹ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಪರವಾನಗಿ ಪಡೆಯಲು ಸಾಧ್ಯವಾಗಲಿಲ್ಲ, ಮತ್ತು ಪ್ರಸ್ತುತ ಕಾನೂನುಬದ್ಧವಾಗಿಲ್ಲ ಪ್ರತಿಷ್ಠಾನದಿಂದ ಹಣವನ್ನು ಸ್ವೀಕರಿಸಲು ಭಾರತದಲ್ಲಿ ಚಾರಿಟಿಯಾಗಿ ನೋಂದಾಯಿಸಲಾಗಲಿಲೢ. ಫೌಂಡೇಶನ್ ಮತ್ತು ಅಫಿಲಿಯೇಷನ್ಸ್ ಕಮಿಟಿ (AffCom) ಎರಡೂ ಈ ಪರವಾನಗಿ ಮತ್ತು ನೋಂದಣಿಯನ್ನು ಭವಿಷ್ಯದಲ್ಲಿ ಸುರಕ್ಷಿತಗೊಳಿಸಬಹುದು ಮತ್ತು ಅಧ್ಯಾಯವು ಮಾನ್ಯತೆಗೆ ಅರ್ಹರಾಗಲು ಬೇಕಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಆಶಿಸುತ್ತದೆ.

ಉತ್ತಮ ನಾಯಕತ್ವವನ್ನು ತೋರಿಸಿದ ಮತ್ತು ನಮ್ಮ ಜಾಗತಿಕ ಚಳವಳಿಯೊಳಗೆ ಗಮನಾರ್ಹ ಪರಿಣಾಮವನ್ನು ಬೀರಿದ ಭಾರತದಲ್ಲಿ ಅತ್ಯಾಸಕ್ತಿಯಿಂದ ಬೆಳೆಯುತ್ತಿರುವ ಸಮುದಾಯಕ್ಕೆ ನಾವು ಆಭಾರಿಯಾಗಿದ್ದೇವೆ. ಫೌಂಡೇಶನ್ ಪ್ರಸ್ತುತ ಎಂಟು ಭಾರತೀಯ ಭಾಷಾ ಸಮುದಾಯ ಬಳಕೆದಾರರ ಗುಂಪುಗಳನ್ನು ಬೆಂಬಲಿಸುತ್ತದೆ, ಮತ್ತು ಮುಂಬರುವ ವಾರಗಳಲ್ಲಿ ಇನ್ನೂ ಹೆಚ್ಚಿನ ಎರಡನ್ನು AffCom ಘೋಷಿಸಲಿದೆ ಎಂದು ನಾವು ನಿರೀಕ್ಷಿಸುತ್ತೇವೆ. ಭಾರತದಲ್ಲಿನ ಓದುಗರಿಂದ ನಾವು ಪ್ರತಿ ತಿಂಗಳು 700 ದಶಲಕ್ಷಕ್ಕೂ ಹೆಚ್ಚು ಪುಟವೀಕ್ಷಣೆಗಳನ್ನು ವಿಕಿಪೀಡಿಯಾಗೆ ಸ್ವೀಕರಿಸುತ್ತೇವೆ, ಮತ್ತು ವಿಕಿಪೀಡಿಯಾ ಮತ್ತು ವಿಕಿಮೀಡಿಯಾ ಯೋಜನೆಗಳ ಭವಿಷ್ಯಕ್ಕಾಗಿ ಭಾರತೀಯ ಸಮುದಾಯದ ಬೆಳವಣಿಗೆಯು ಮೊದಲ ಆದ್ಯತೆಯಾಗಿದೆ.

ವಿಕಿಮೀಡಿಯಾ ಆಂದೋಲನಕ್ಕೆ ಭಾರತದ ಗಣರಾಜ್ಯ ಬಹಳ ಮಹತ್ವದ್ದಾಗಿದೆ. ವಿಕಿಮೀಡಿಯಾ ಫೌಂಡೇಶನ್ ಭಾರತದಾದ್ಯಂತ ಸ್ವಯಂಸೇವಕ ಸಂಪಾದಕರು, ಕೊಡುಗೆದಾರರು, ಓದುಗರು ಮತ್ತು ದಾನಿಗಳನ್ನು ಬೆಂಬಲಿಸಲು ಬದ್ಧವಾಗಿದೆ. ವಿಕಿಮೀಡಿಯಾ ಯೋಜನೆಗಳು ಮತ್ತು ನಮ್ಮ ಮುಕ್ತ ಜ್ಞಾನ ಮಿಷನ್ ಅನ್ನು ಬೆಂಬಲಿಸುವ ನಿಮ್ಮ ಮುಂದುವರಿದ ಮತ್ತು ಬೆಳೆಯುತ್ತಿರುವ ಪ್ರಯತ್ನಗಳಿಗೆ ನಾವು ಕೃತಜ್ಞರಾಗಿರುತ್ತೇವೆ. ನಿಮ್ಮೊಂದಿಗೆ ನಮ್ಮ ಕೆಲಸವನ್ನು ಮುಂದುವರಿಸಲು ನಾವು ಎದುರು ನೋಡುತ್ತೇವೆ.

ವಿಕಿಮೀಡಿಯ ಫೌಂಡೇಶನ್ ಪರವಾಗಿ,

ವಲೆರಿ ಡಿ ಕೋಸ್ಟಾ
ಕಮ್ಯುನಿಟಿ ಎಂಗೇಜ್ಮೆಂಟ್ ಮುಖ್ಯಸ್ಥ
ವಿಕಿಮೀಡಿಯ ಫ಼ೌಂಡೇಶನ್