ತಾಂತ್ರಿಕ/ಸುದ್ದಿ/೨೦೨೨/೫೦
Appearance
ನಿಮ್ಮ ಮತ್ತು ಇತರ ವಿಕಿಮೀಡಿಯನ್ನರ ಮೇಲೆ ಪರಿಣಾಮ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಸಾಪ್ತಾಹಿಕ ತಾಂತ್ರಿಕ ಸುದ್ದಿ ಸಾರಾಂಶಗಳು ನಿಮಗೆ ಸಹಾಯ ಮಾಡುತ್ತವೆ. ಸೂಚನೆ ಪಡೆಯಿರಿ, ಕೊಡುಗೆ ನೀಡಿ ಮತ್ತು ಸಲಹೆ ನೀಡಿ.
ಹಿಂದಿನ | ೨೦೨೨, ವಾರ ೫೦ (ಸೋಮವಾರ ೧೨ ಡಿಸೆಂಬರ್ ೨೦೨೨) | ಮುಂದಿನ |
ತಾಂತ್ರಿಕ ಸುದ್ದಿ: 2022-50
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನಿಮಗೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಇತ್ತೀಚಿನ ಬದಲಾವಣೆಗಳು
- ಮೊಬೈಲ್ನಲ್ಲಿನ ಚರ್ಚಾ ಪುಟಗಳ ಯೋಜನೆಗಾಗಿ 15 ವಿಕಿಪೀಡಿಯಾಗಳಲ್ಲಿ ಪ್ರಾಥಮಿಕ ಪರೀಕ್ಷೆಯು ಪ್ರಾರಂಭವಾಗಿದೆ. ಮೊಬೈಲ್ ವೆಬ್ ಸೈಟ್ನಲ್ಲಿ ಅರ್ಧದಷ್ಟು ಸಂಪಾದಕರು Reply ಟೂಲ್ ಮತ್ತು ಇತರ ವೈಶಿಷ್ಟ್ಯಗಳಿಗೆ ಬಳಸುವ ಸಾಮರ್ಥ್ಯ ಹೊಂದಿರುತ್ತಾರೆ. [೧]
- ಟೆಂಪ್ಲೇಟ್ಗಳೊಂದಿಗೆ ಬಳಕೆದಾರಹೆಸರುಗಳು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾಡಲು
=
ಅಕ್ಷರವನ್ನು ಹೊಸ ಬಳಕೆದಾರರ ಹೆಸರುಗಳಲ್ಲಿ ಬಳಸಲಾಗುವುದಿಲ್ಲ. ಅಸ್ತಿತ್ವದಲ್ಲಿರುವ ಬಳಕೆದಾರರ ಹೆಸರುಗಳಿಗೆ ಈ ನಿರ್ಬಂಧ ಪರಿಣಾಮ ಬೀರುವುದಿಲ್ಲ. [೨]
ಈ ವಾರದ ಮುಂದಿನ ಬದಲಾವಣೆಗಳು
ಮೀಡಿಯಾವಿಕಿ ಹೊಸ ಆವೃತ್ತಿ ೧೩ ಡಿಸೆಂಬರ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೧೪ ಡಿಸೆಂಬರ್ ದಿಂದ ವಿಕಿಪೀಡಿಯವಲ್ಲದ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೧೫ ಡಿಸೆಂಬರ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳಲ್ಲಿ ಸೇರಿಸಲಾಗುವುದು.
ಚರ್ಚಾ ಪರಿಕರಗಳಿಂದ ವಿಭಾಗದ ಶೀರ್ಷಿಕೆಗಳ ಕೆಳಗೆ ಚರ್ಚೆಯ ಮೆಟಾಡೇಟಾವನ್ನು ತೋರಿಸಲು ಬಳಸುವ HTML ಮಾರ್ಕ್ಅಪ್ ಅನ್ನು ಈ ಶೀರ್ಷಿಕೆಗಳ ನಂತರ ಸೇರಿಸಲಾಗುತ್ತದೆ, ಅವುಗಳ ಒಳಗೆ ಅಲ್ಲ. ಈ ಬದಲಾವಣೆಯು ಸ್ಕ್ರೀನ್ ರೀಡರ್ ಸಾಫ್ಟ್ವೇರ್ಗಾಗಿ ಚರ್ಚಾ ಪುಟಗಳ ಬಳಸುವ ಸಾಮರ್ಥ್ಯ ಸುಧಾರಿಸುತ್ತದೆ. [೩]
ಕಾರ್ಯಕ್ರಮಗಳು
- ಕೂಲೆಸ್ಟ್ ಟೂಲ್ ಅವಾರ್ಡ್ನ ನಾಲ್ಕನೇ ಆವೃತ್ತಿಯು ಆನ್ಲೈನ್ನಲ್ಲಿ ಶುಕ್ರವಾರ 16 ಡಿಸೆಂಬರ್ 2022 ರಂದು 17:00 UTC ಕ್ಕೆ ನಡೆಯಲಿದೆ! ಈವೆಂಟ್ ಅನ್ನು YouTube ನಲ್ಲಿ ಮೀಡಿಯಾವಿಕಿ ಚಾನಲ್ ನಲ್ಲಿ ಲೈವ್-ಸ್ಟ್ರೀಮ್ ಮಾಡಲಾಗುತ್ತದೆ ಮತ್ತು ಕಾಮನ್ಸ್ಗೆ ಸೇರಿಸಲಾಗುವುದು.
ಟೆಕ್ ಸುದ್ದಿಯನ್ನು ಬರಹಗಾರರ ಮೂಲಕ ಸಿದ್ಧಪಡಿಸಲಾಗಿದೆ ಮತ್ತು ಬಾಟ್ ಮೂಲಕ ಪೋಸ್ಟ್ ಮಾಡಲಾಗಿದೆ • ಕೊಡುಗೆ ನೀಡಿ • ಭಾಷಾಂತರ ಮಾಡಿ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಸುದ್ದಿ ಪಟ್ಟಿ ಪರಿಶೀಲಿಸಿ.