ತಾಂತ್ರಿಕ/ಸುದ್ದಿ/೨೦೨೩/೦೭
ನಿಮ್ಮ ಮತ್ತು ಇತರ ವಿಕಿಮೀಡಿಯನ್ನರ ಮೇಲೆ ಪರಿಣಾಮ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಸಾಪ್ತಾಹಿಕ ತಾಂತ್ರಿಕ ಸುದ್ದಿ ಸಾರಾಂಶಗಳು ನಿಮಗೆ ಸಹಾಯ ಮಾಡುತ್ತವೆ. ಸೂಚನೆ ಪಡೆಯಿರಿ, ಕೊಡುಗೆ ನೀಡಿ ಮತ್ತು ಸಲಹೆ ನೀಡಿ.
ಹಿಂದಿನ | ೨೦೨೩, ವಾರ ೦೭ (ಸೋಮವಾರ ೧೩ ಫೆಬ್ರವರಿ ೨೦೨೩) | ಮುಂದಿನ |
ತಾಂತ್ರಿಕ ಸುದ್ದಿ: 2023-07
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನಿಮಗೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಸಮಸ್ಯೆಗಳು
- ಗಸ್ತು ತಿರುಗುವ ಸಂಪಾದನೆಗಳನ್ನು ಸಕ್ರಿಯಗೊಳಿಸಿದ ವಿಕಿಗಳಲ್ಲಿ, ಮಾರ್ಗದರ್ಶಿ ಪಟ್ಟಿಗೆ ಸ್ವಯಂಗಸ್ತು ಮಾರ್ಗದರ್ಶಕರು ಮಾಡಿದ ಬದಲಾವಣೆಗಳನ್ನು ಗಸ್ತು ಎಂದು ಸರಿಯಾಗಿ ಗುರುತಿಸಲಾಗುತ್ತಿರಲಿಲ್ಲ. ಈ ವಾರದಲ್ಲಿ ಅದನ್ನು ಸರಿಪಡಿಸಲಾಗುವುದು. [೧]
ಈ ವಾರದ ಮುಂದಿನ ಬದಲಾವಣೆಗಳು
- ಮೀಡಿಯಾವಿಕಿ ಹೊಸ ಆವೃತ್ತಿ ೧೪ ಫೆಬ್ರವರಿ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೧೫ ಫೆಬ್ರವರಿ ದಿಂದ ವಿಕಿಪೀಡಿಯವಲ್ಲದ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೧೬ ಫೆಬ್ರವರಿ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳಲ್ಲಿ ಸೇರಿಸಲಾಗುವುದು.
- ಮೊಬೈಲ್ ಸೈಟ್ ಬಳಸುವ ಎಲ್ಲಾ ಸಂಪಾದಕರಿಗೆ ಪ್ರತ್ಯುತ್ತರ ಪರಿಕರ ಮತ್ತು ಚರ್ಚಾ ಪರಿಕರಗಳ ಇತರ ಭಾಗಗಳನ್ನು ನಿಯೋಜಿಸಲಾಗುವುದು. ನೀವು ಈ ನಿರ್ಧಾರದ ಕುರಿತು ಇನ್ನಷ್ಟು ಓದಬಹುದು. [೨]
ಭವಿಷ್ಯದ ಬದಲಾವಣೆಗಳು
- ಮಾರ್ಚ್ 1 ರಂದು ಎಲ್ಲಾ ವಿಕಿಗಳನ್ನು ಕೆಲವು ನಿಮಿಷಗಳವರೆಗೆ ಓದಲು-ಮಾತ್ರ ಇರುತ್ತದೆ. ಇದನ್ನು 14:00 UTCಗೆ ಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಯನ್ನು ಮುಂದಿನ ತಾಂತ್ರಿಕ ಸುದ್ದಿ ಪ್ರಕಟಿಸಲಾಗುವುದು ಮತ್ತು ಮುಂದಿನ ವಾರಗಳಲ್ಲಿ ಪ್ರತಿ ವಿಕಿಗಳಲ್ಲಿ ಪೋಸ್ಟ್ ಮಾಡಲಾಗುವುದು. [೩][೪][೫]
ತಾಂತ್ರಿಕ ಸುದ್ದಿಯನ್ನು ಬರಹಗಾರರ ಮೂಲಕ ಸಿದ್ಧಪಡಿಸಲಾಗಿದೆ ಮತ್ತು ಬಾಟ್ ಮೂಲಕ ಪೋಸ್ಟ್ ಮಾಡಲಾಗಿದೆ • ಕೊಡುಗೆ ನೀಡಿ • ಭಾಷಾಂತರ ಮಾಡಿ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಸುದ್ದಿ ಪಟ್ಟಿ ಪರಿಶೀಲಿಸಿ.