ತಾಂತ್ರಿಕ/ಸುದ್ದಿ/೨೦೨೩/೧೩
Appearance
ನಿಮ್ಮ ಮತ್ತು ಇತರ ವಿಕಿಮೀಡಿಯನ್ನರ ಮೇಲೆ ಪರಿಣಾಮ ಬೀರುವ ಇತ್ತೀಚಿನ ಸಾಫ್ಟ್ವೇರ್ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಸಾಪ್ತಾಹಿಕ ತಾಂತ್ರಿಕ ಸುದ್ದಿ ಸಾರಾಂಶಗಳು ನಿಮಗೆ ಸಹಾಯ ಮಾಡುತ್ತವೆ. ಸೂಚನೆ ಪಡೆಯಿರಿ, ಕೊಡುಗೆ ನೀಡಿ ಮತ್ತು ಸಲಹೆ ನೀಡಿ.
ಹಿಂದಿನ | ೨೦೨೩, ವಾರ ೧೩ (ಸೋಮವಾರ ೨೭ ಮಾರ್ಚ್ ೨೦೨೩) | ಮುಂದಿನ |
ತಾಂತ್ರಿಕ ಸುದ್ದಿ: 2023-13
ಇದು ವಿಕಿಮೀಡಿಯಾ ತಾಂತ್ರಿಕ ಸಮುದಾಯದ ಇತ್ತೀಚಿನ ತಾಂತ್ರಿಕ ಸುದ್ದಿ. ದಯವಿಟ್ಟು ಈ ಬದಲಾವಣೆಗಳ ಬಗ್ಗೆ ಇತರ ಬಳಕೆದಾರರಿಗೆ ತಿಳಿಸಿ. ಎಲ್ಲಾ ಬದಲಾವಣೆಗಳನ್ನು ನಿಮಗೆ ಪರಿಣಾಮ ಬೀರುವುದಿಲ್ಲ. ಅನುವಾದಗಳು ಲಭ್ಯವಿದೆ.
ಇತ್ತೀಚಿನ ಬದಲಾವಣೆಗಳು
- ದುರ್ಬಳಕೆ ಫಿಲ್ಟರ್ ಪರಿಸ್ಥಿತಿಗಳ ಮಿತಿಯನ್ನು ೧೦೦೦ ರಿಂದ ೨೦೦೦ ಕ್ಕೆ ಹೆಚ್ಚಿಸಲಾಗಿದೆ. [೧]
- ಕೆಲವು ಜಾಗತಿಕ ದುರ್ಬಳಕೆ ಫಿಲ್ಟರ್ ಕ್ರಮಗಳು ಇನ್ನು ಮುಂದೆ ಸ್ಥಳೀಯ ಯೋಜನೆಗಳಿಗೆ ಅನ್ವಯಿಸುವುದಿಲ್ಲ. [೨]
- Tools ಮೆನುವಿನಲ್ಲಿರುವ Subscribe ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಡೆಸ್ಕ್ಟಾಪ್ ಬಳಕೆದಾರರು ಈಗ ಚರ್ಚೆ ಪುಟಗಳಿಗೆ ಚಂದಾದಾರರಾಗಲು ಸಾಧ್ಯವಾಗುತ್ತದೆ. ನೀವು ಚರ್ಚೆ ಪುಟಕ್ಕೆ ಚಂದಾದಾರರಾಗಿದ್ದರೆ, ಆ ಚರ್ಚೆ ಪುಟದಲ್ಲಿ ಹೊಸ ವಿಷಯಗಳನ್ನು ಪ್ರಾರಂಭಿಸಿದಾಗ ನೀವು ಅಧಿಸೂಚನೆಗಳನ್ನು ಸ್ವೀಕರಿಸುತ್ತೀರಿ. ಇದು ನಿಮ್ಮ ವೀಕ್ಷಣಾ ಪಟ್ಟಿಯಲ್ಲಿ ಪುಟವನ್ನು ಹಾಕುವುದರಿಂದ ಅಥವಾ ಒಂದೇ ಚರ್ಚೆಗೆ ಚಂದಾದಾರರಾಗುವುದರಿಂದ ಪ್ರತ್ಯೇಕವಾಗಿದೆ. [೩]
ಈ ವಾರದ ಮುಂದಿನ ಬದಲಾವಣೆಗಳು
- ಮೀಡಿಯಾವಿಕಿ ಹೊಸ ಆವೃತ್ತಿ ೨೮ ಮಾರ್ಚ್ ನಿಂದ ಪರೀಕ್ಷಾ ವಿಕಿಗಳು ಮತ್ತು MediaWiki.org ನಲ್ಲಿ ಇರುತ್ತದೆ. ಇದು ೨೯ ಮಾರ್ಚ್ ದಿಂದ ವಿಕಿಪೀಡಿಯವಲ್ಲದ ವಿಕಿಗಳು ಮತ್ತು ಕೆಲವು ವಿಕಿಪೀಡಿಯಗಳಲ್ಲಿ ಇರುತ್ತದೆ. ಇದು ೩೦ ಮಾರ್ಚ್ (ಕ್ಯಾಲೆಂಡರ್) ನಿಂದ ಎಲ್ಲಾ ವಿಕಿಗಳಲ್ಲಿ ಸೇರಿಸಲಾಗುವುದು.
ಭವಿಷ್ಯದ ಬದಲಾವಣೆಗಳು
- ನೀವು ವಿಕ್ಷನರಿಗಳು ಮತ್ತು ವಿಕಿಪೀಡಿಯಾಗಳಲ್ಲಿ ಎಲ್ಲಾ ಇತಿಹಾಸ ಪುಟಗಳಲ್ಲಿ ದೃಶ್ಯ ವ್ಯತ್ಯಾಸಗಳನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ. [೪]
- ಲೆಗಸಿ ಮೊಬೈಲ್ ಕಂಟೆಂಟ್ ಸೇವೆ ಜುಲೈ 2023 ರಲ್ಲಿ ಕಣ್ಮರೆಯಾಗಲಿದೆ. ಸೇವೆಯ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಡೆವಲಪರ್ಗಳು ಪಾರ್ಸಾಯ್ಡ್ ಅಥವಾ ಇನ್ನೊಂದು API ಗೆ ಬದಲಾಯಿಸಲು ಪ್ರೋತ್ಸಾಹಿಸಲಾಗಿದೆ. [೫]
ತಾಂತ್ರಿಕ ಸುದ್ದಿಯನ್ನು ಬರಹಗಾರರ ಮೂಲಕ ಸಿದ್ಧಪಡಿಸಲಾಗಿದೆ ಮತ್ತು ಬಾಟ್ ಮೂಲಕ ಪೋಸ್ಟ್ ಮಾಡಲಾಗಿದೆ • ಕೊಡುಗೆ ನೀಡಿ • ಭಾಷಾಂತರ ಮಾಡಿ • ಸಹಾಯ ಪಡೆಯಿರಿ • ಪ್ರತಿಕ್ರಿಯೆ ನೀಡಿ • ಸುದ್ದಿ ಪಟ್ಟಿ ಪರಿಶೀಲಿಸಿ.