ವಿಕಿಕಾನ್ಫರೆನ್ಸ್ ಇಂಡಿಯಾ ೨೦೨೩/ಸ್ಕಾಲರ್ ಶಿಪ್ಸ್
Jump to navigation
Jump to search
೨೮ - ೩೦, ಎಪ್ರಿಲ್, ೨೦೨೩
ಹೈದರಾಬಾದ್, ಭಾರತ
ಮುಖ್ಯ ಪುಟ | ಸ್ಕಾಲರ್‌ಶಿಪ್‌ಗಳು | ಸಮುದಾಯದ ಯೋಚನೆಗಳು | ಕಾರ್ಯಕ್ರಮ | ಸಂಪರ್ಕಿಸಿ | ತಂಡ | ಒಡನಾಟದ ನೀತಿ | ಮತ್ತೆ ಮತ್ತೆ ಕೇಳುವ ಪ್ರಶ್ನೆಗಳು |
ಈ ಸ್ಕಾಲರ್ ಶಿಪ್ ಮುಖ್ಯವಾಗಿ ಸಕ್ರಿಯ ವಿಕಿಮೀಡಿಯನ್ನರು ಮತ್ತು ಇತರ ಭಾಗೀದಾರರು ಕಾನ್ಫರೆನ್ಸಿನಲ್ಲಿ ಪಾಲ್ಗೊಳ್ಳಲು ನೆರವು ನೀಡುತ್ತದೆ. ಇದು ಅವರ ಪ್ರಯಾಣ, ವಸತಿ, ಆಹಾರ, ನೋಂದಣಿ ಮತ್ತು ಕಾನ್ಫರೆನ್ಸ್ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿದ ಇತರ ಸಂಭಾವ್ಯ ಖರ್‍ಚುಗಳನ್ನು ಒಳಗೊಳ್ಳುತ್ತದೆ. ಎಲ್ಲಾ ಅರ್‍ಜಿಗಳು ಒಂದು ಸ್ಕಾಲರ್ ಶಿಪ್ ಕಮಿಟಿಯಿಂದ ಪರಿಶೀಲಿಸಲ್ಪಡುತ್ತವೆ.
ಸ್ಕಾಲರ್ ಶಿಪ್ ಅರ್‍ಜಿಗಳು ೧೧ ನವೆಂಬರ್ ೨೦೨೨ ರಿಂದ ೧೪ ಡಿಸೆಂಬರ್ ೨೦೨೨ರವರೆಗೆ ತೆರೆದಿರುತ್ತವೆ. ಏನಾದರೂ ಪ್ರಶ್ನೆಗಳಿದ್ದಲ್ಲಿ ಚರ್‍ಚೆ ಪುಟದಲ್ಲಿ ಕೇಳಬಹುದು
ವಿಭಾಗಗಳು
ನೀವು ಕಾನ್ಫರೆನ್ಸಿಗೆ ಬರಲು ಯಾವ ಪ್ರದೇಶದಿಂದ ಪ್ರಯಾಣ ಮಾಡುತ್ತೀರಿ ಎಂಬುದರ ಆಧಾರದ ಮೇಲೆ ನಾಲ್ಕು ವಿಭಾಗಗಳಿವೆ:
- ಪ್ರಾದೇಶಿಕ ವಿಭಾಗ: ಆಂಧ್ರ ಮತ್ತು ತೆಲಂಗಾಣ ರಾಜ್ಯದಲ್ಲಿ ನೆಲೆಸಿರುವ ವಿಕಿಮೀಡಿಯನ್ನರು (~೨೦ ಸ್ಕಾಲರ್ ಶಿಪ್)
- ರಾಷ್ಟ್ರೀಯ ವಿಭಾಗ: ಆಂದ್ರ ಮತ್ತು ತೆಲಂಗಾಣ ಹೊರತುಪಡಿಸಿ ಭಾರತದ ಇತರ ರಾಜ್ಯಗಳಲ್ಲಿ ನೆಲೆಸಿರುವ ವಿಕಿಮೀಡಿಯನ್ನರು (~೮೦ ಸ್ಕಾಲರ್ ಶಿಪ್)
- SAARC ವಿಭಾಗ: ಭಾರತ ಹೊರತುಪಡಿಸಿ ಇತರ ದಕ್ಷಿಣ ಏಷ್ಯಾ ದೇಶಗಳಿಂದ ಬರುವ ವಿಕಿಮೀಡಿಯನ್ನರು (~೧೦ ಸ್ಕಾಲರ್ ಶಿಪ್)
- ಅಂತಾರಾಷ್ಟ್ರೀಯ ವಿಭಾಗ: ದಕ್ಷಿಣ ಏಷ್ಯಾದ ದೇಶಗಳನ್ನು ಹೊರತುಪಡಿಸಿ ಬೇರೆ ದೇಶಗಳಲ್ಲಿದ್ದು, ದಕ್ಷಿಣ ಏಷ್ಯಾದ ಸಮುದಾಯ ಮತ್ತು ಯೋಜನೆಗಳ ಜೊತೆಗೆ ಕೆಲಸ ಮಾಡುತ್ತಿರುವ ವಿಕಿಮೀಡಿಯನ್ನರು (~೩ ಸ್ಕಾಲರ್ ಸಿಪ್)
ಅರ್‍ಜಿ
ನಿಮ್ಮ ಸ್ಕಾಲರ್ ಶಿಪ್ ಅರ್‍ಜಿಯನ್ನು ಇಲ್ಲಿ ಸಲ್ಲಿಸಿ