ವಿಕಿಮೀಡಿಯ ಕಾಮನ್ಸ್
ವಿಕಿಮೀಡಿಯ ಕಾಮನ್ಸ್(ಇಂಗ್ಲೀಷ್ ಮುಖಪುಟ) ಎಂಬುದು ಮುಕ್ತ ಬಳಕೆ ಚಿತ್ರಗಳ, ಶಬ್ದಗಳ, ದ್ವನಿ ಪಠ್ಯಗಳ ಮತ್ತು ಇತರ ಮೀಡಿಯ ಫೈಲುಗಳ ಒಂದು ಆನ್ ಲೈನ್ ಭಂಡಾರ. ಇದು ೭ ಸೆಪ್ಟೆಂಬರ್ ೨೦೦೪ರಂದು ಆರಂಭಗೊಂಡಿತು.
As of 2024, it holds over 110,000,000 files (572 TB).
ವಿಕಿಮೀಡಿಯ ಕಾಮನ್ಸ್ ಎಂದರೇನು?
ವಿಕಿಮೀಡಿಯ ಕಾಮನ್ಸಿನ ಗುರಿಯೆಂದರೆ "ಸಾರ್ವಜನಿಕ ಡೊಮೈನ್ ಹಾಗೂ ಮುಕ್ತ ಪರವಾನಗಿಯ ಶೈಕ್ಷಣಿಕ ಮೀಡಿಯ ಮಾಹಿತಿಗಳು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ಒಂದು ಮೀಡಿಯ ಫೈಲ್ ಭಂಡಾರವನ್ನು ಒದಗಿಸುವುದು. ಇದು ವಿಕಿಮೀಡಿಯ ಫೌಂಡೇಶನ್ನಿನ ಅನೇಕ ಯೋಜನೆಗಳಿಗೂ ಕೂಡ ಒಂದು ಸಾಮಾನ್ಯ ಭಂಡಾರವಾಗಿ ಬಳಕೆಯಾಗುತ್ತದೆ."
ವಿಕಿಮೀಡಿಯ ಕಾಮನ್ಸ್ ಒಂದು ಬಹುಭಾಷೆಗಳ ಯೋಜನೆ. ಡೀಫಾಲ್ಟ್ ಭಾಷೆಯು ಇಂಗ್ಲೀಷ್ ಆಗಿರುತ್ತದೆ, ಆದರೆ ನೋಂದಾಯಿತ ಬಳಕೆದಾರರು ಯಾವುದೇ ಇತರ ಲಭ್ಯವಿರುವ ಭಾಷಾ ಅನುವಾದಗಳ ಯೂಸರ್ ಇಂಟರ್ಫೇಸ್ ಗೆ ಬದಲಾಯಿಸಿಕೊಳ್ಲಬಹುದು. ಹಲವು ಪುಟಗಳು ಅನೇಕ ಭಾಷೆಗಳಿಗೆ ತರ್ಜುಮೆ ಮಾಡಲ್ಪಟ್ಟಿದೆ. ಬಳಕೆದಾರರು ಸಹ ಭಾಷಾಂತರಗಳನ್ನು ಮಾಡುವುದನ್ನು ಪ್ರೋತ್ಸಾಹಿಸುತ್ತೇವೆ.
ವಿಕಿಮೀಡಿಯ ಕಾಮನ್ಸ್ ಸ್ವಾಗತ ಪುಟ ನೋಡಿ ಮತ್ತು ಪೂರ್ಣ ವಿವರಗಳಿಗಾಗಿ ಸಮುದಾಯ ಪೋರ್ಟಲ್ ನೋಡಿ. ಇತಿಹಾಸ ವಿವರಗಳಿಗಾಗಿ ಐತಿಹಾಸಿಕ ಯೋಜನಾ ನಕ್ಷೆ ನೋಡಿ.
ಕೇಂದ್ರ ಮೀಡಿಯ ಭಂಡಾರ
ಹಿಂದೆ ಹಲವು ವಿಕಿಮೀಡಿಯ ಯೋಜನೆಗಳಲ್ಲಿ ಪ್ರತಿಯೊಂದು—ಪ್ರತಿ ವಿಕಿಪೀಡಿಯಾ ಮತ್ತು ವಿಕ್ಷನರಿ , ಜೊತೆಗೆ Wikibooks , Wikisource , Wikinews , ವಿಕಿವರ್ಸಿಟಿ , ಮತ್ತು Wikiquote —ಅವರವರದ್ದೇ ಆದ ಸ್ವಂತ ಇಮೇಜ್ ನೇಮ್ ಸ್ಪೇಸ್ ಬಳಸುತ್ತಿದ್ದವು. ಬೇರೆ ಯೋಜನೆಗಳ ಚಿತ್ರಗಳನ್ನು ಬಳಸಿಕೊಳ್ಳಲು ಯಾವುದೇ ಖಾತರಿಯಾದ ದಾರಿ ಇರಲಿಲ್ಲ. ಒಂದು ಯೋಜನೆಯಲ್ಲಿರುವ ಹಲವು ಉತ್ತಮ ಮುಕ್ತ ಅಪ್ಲೋಡುಗಳು ಇನ್ನೊಂದು ವಿಕಿಯ ಗಮನಕ್ಕೆ ಬರದೇಹೋಗುತ್ತಿದ್ದವು. ಹಾಗಾಗಿ, ಬೌದ್ಧಿಕ ಮತ್ತು ಸೃಜನಾತ್ಮಕ ಕೃತಿಗಳ ಅನಗತ್ಯ ಡೂಪ್ಲಿಕೇಶನ್ ಮತ್ತು ಅನಗತ್ಯ ಪುನರಾವರ್ತನೆಯಾಗುತ್ತಿದುದಲ್ಲದೇ ಹೆಚ್ಚಿನ ನಿರ್ವಹಣೆಯೂ ಬೇಕಾಗುತ್ತಿತ್ತು.
Wikimedia ಸೋದರ ಯೋಜನೆಗಳಾದ ( ವಿಕಿಪೀಡಿಯಾ , Wikibooks , Wikinews ...) ಯೋಜನೆಗಳಲ್ಲಿ {{Commons}} ಟೆಂಪ್ಲೇಟನ್ನು ಬಳಸಿ ಕಾಮನ್ಸ್ ಗೆ ಸಂಪರ್ಕ ಕೊಡಬಹುದು. There also is a volunteer-run app for the platform.
ಯೋಜನೆಗೆ ನೇರ ಸಂಪರ್ಕಕೊಂಡಿಗಳು
ಈ ಯೋಜನೆಯ ಮುಖಪುಟಕ್ಕಾಗಿ, commons.wikimedia.org ಇಲ್ಲಿ ಹೆಚ್ಚಿನ ವಿವರಗಳನ್ನು ನೋಡಿ.