೨೦೧೫ ಕಾರ್ಯತಂತ್ರ/ಸಮುದಾಯ ಸಮಾಲೋಚನೆ

From Meta, a Wikimedia project coordination wiki
This page is a translated version of the page Strategy/Wikimedia Foundation/2015/Community consultation and the translation is 79% complete.
Outdated translations are marked like this.
Strategy consultation report

ವಿಕಿಮೀಡಿಯ ಫ಼ೌಂಡೇಶನ್(ಡಬ್ಲು.ಎಂ.ಎಫ಼್) ವಿಕಿಪೀಡಿಯದಂತಹ ಪ್ರಮುಖ ಜ್ಞಾನ ಯೋಜನೆಗಳನ್ನು ಬೆಂಬಲಿಸುವ ಮತ್ತು ನಿರ್ವಹಿಸುವ ಒಂದು ಲಾಭರಹಿತ, ದತ್ತಿ ಸಂಸ್ಥೆ. ಸಹಸ್ರಾರು ಸ್ವಯಂಸೇವಕ ಕೊಡುಗೆದಾರರು ಮತ್ತು ಓದುಗರ ಜೊತೆ ಕೆಲಸ ನಿರ್ವಹಿಸುತ್ತಾ, ನಾವು ಉಚಿತ, ಬಹುಭಾಷಾ ಶೈಕ್ಷಣಿಕ ವಿಷಯವನ್ನು ಜಗಕ್ಕೆ ಹಂಚುತ್ತಾ, ನಮ್ಮ ಯೋಜನೆಗಳನ್ನು ಬೆಳೆಸುತ್ತಾ ಅವುಗಳ ಜಾಗತಿಕ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದೇವೆ.

ನಿಮ್ಮ ದೃಷ್ಟಿಕೋನ ಗಣ್ಯವಾದುದು. ನಾವು ಡಬ್ಲು.ಎಂ.ಎಫ಼್.ನ ಒಂದು ತಂತ್ರದ ಕುರಿತು ಕಾರ್ಯ ನಿರ್ವಹಿಸುತ್ತಿದ್ದೇವೆ, ಅದಕ್ಕಾಗಿ ನಮಗೆ ಭವಿಷ್ಯದ ಕುರಿತು ಕೆಲವು ಪೂರ್ವಭಾವಿ ವಿಚಾರಗಳು ಬೇಕಾಗಿವೆ. ನಿಮ್ಮಂತಹ ಜನರಿಂದ ನಾವು ಮಾಹಿತಿ ಕಲೆಹಾಕುತ್ತಿದ್ದೇವೆ. ನಿಮ್ಮ ಪರಿಣತಿ ಮತ್ತು ದೃಷ್ಟಿಕೋನ ನಮ್ಮ ಚಿಂತನೆ ವಿಸ್ತರಿಸುವಲ್ಲಿ ಮತ್ತು ನಮ್ಮ ಸಾಮಾನ್ಯ ಗುರಿಗಳ ಸರಿಯಾದ ಫ಼ಲಿತಾಂಶ ತರುವಲ್ಲಿ ಸಹಾಯಕಾರಿಯಾಗಿದೆ. ನಮ್ಮ ತಂತ್ರಗಳನ್ನು ರೂಪಿಸಲು ನಿಮ್ಮ ಕೊಡುಗೆಗಳನ್ನು ನಾವು ಓದುತ್ತೇವೆ ಮತ್ತು ಅದನ್ನು ಸಮುದಾಯದ ಜೊತೆಗೆ ವ್ಯಾಖ್ಯೆಗಳಿಗಾಗಿ ಹಂಚುತ್ತಿದ್ದೇವೆ.

ನಿಮಗೆ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ, ದಯವಿಟ್ಟು Backgroundಅನ್ನು ವಿಮರ್ಶಿಸಿ ಅಥವಾ this blog post ನೋಡಿರಿ.

ನೀವು ಹೇಗೆ ಭಾಗವಹಿಸಬಹುದು?

ಕೆಳಗಿನ ರೂಪುರೇಖೆ ಓದಿರಿ ಮತ್ತು ಪ್ರಶ್ನೆಗಳಿಗೆ the discussion pageಅಲ್ಲಿ ಉತ್ತರಿಸಿ.

ರೂಪುರೇಖೆ

ಅಂತರ್ಜಾಲ ಪರಿಸರ ಬದಲಾಗುತ್ತಿದೆ. ಮುಂದಿನ ಮೂರು ವರ್ಷಗಳಲ್ಲಿ ಕನಿಷ್ಟ ಎರೆಡು ಪ್ರಮುಖ ಜಾಗತಿಕ ಪ್ರವೃತ್ತಿಗಳಿಂದ ನಾವು ಬಲವಾದ ಪರಿಣಮಗಳನ್ನು ಅಪೇ‍ಕ್ಷಿಸುತ್ತೇವೆ.

  • ಜಗತ್ತು ಮೋಬೈಲ್ ಆಗುತ್ತಿದೆ. ಹೆಚ್ಚಿನ ಜನರಿಗೆ ಮೋಬೈಲ್ ಸಾಧನಗಳು ಅಂತರ್ಜಾಲ ಬಳಸುವ ಪ್ರಧಾನ (ಮತ್ತು ಏಕಮಾತ್ರ!) ಮಾರ್ಗವಾಗುತ್ತಿವೆ. ಇದಕ್ಕಾಗಿ ನಮ್ಮ ಜಾಲತಾಣಗಳು ಸಂಪೂರ್ಣವಾಗಿ ಸಿದ್ಧವಾಗಿರಬೆಕಾಗಿರುತ್ತದೆ.
  • ಮುಂದಿನ ಶತಕೋಟಿ ಅಂತರ್ಜಾಲ ಬಳಕೆದಾರರು ಆನ್ ಲೈನ್ ಬರುತ್ತಿದ್ದಾರೆ (ಏಷಿಯಾ, ಲ್ಯಾಟಿನ್ ಅಮೇರಿಕಾ, ಮತ್ತು ಆಫ಼್ರಿಕಾಗಳಿಂದ ಗಣನೀಯವಾಗಿ). ಈ ಬಳಕೆದಾರರಲ್ಲಿ ಯಾವುದೇ ವಿಕಿಮೀಡಿಯ ಯೋಜನೆಯ ಬಗ್ಗೆ ಅತಿ ಕಡಿಮೆ ಅಥವಾ ಯಾವುದೇ ಪೂರ್ವಭಾವಿ ಕಲ್ಪನೆಗಳು ಇರಲಿಕ್ಕಿಲ್ಲ ಮತ್ತು ಅವರಲ್ಲಿ ಭಾಗವಹಿಸುವ ಹೊಸ ಪ್ರೇರಣೆಗಳು ಇರಬಹುದು.

ಪ್ರಶ್ನೆಗಳು

  1. ಮೋಬೈಲ್ ಮತ್ತು ಮುಂದಿನ ಶತಕೋಟಿ ಬಳಕೆದಾರರಲ್ಲದೆ ಯಾವ ಪ್ರಮುಖ ಬದಲಾವಣೆಗಳನ್ನು ನೀವು ಗುರುತಿಸಬಲ್ಲಿರಿ?
  2. ನಿಮಗೆ ಮುಖ್ಯವೆನ್ನಿಸುವ ಭವಿಷ್ಯದ ಬದಲಾವಣೆಗಳ ಅನುಸಾರ, ವೃದ್ಧಿಸುತ್ತಿರುವ ಮತ್ತು ಆರೋಗ್ಯಕರ ವಿಕಿಮೀಡಿಯ ಯೋಜನೆಗಳು ಯಾವ ರೀತಿಯಲ್ಲಿ ಕಂಡುಬರುತ್ತವೆ?

ನಿಮ್ಮ ಯೋಚನೆಗಳನ್ನು ನಮಗೆ ತಿಳಿಸಿ

ಕೆಳಗಿನ ಗುಂಡಿಯನ್ನು ಒತ್ತುವ ಮೂಲಕ ವಿಕಿಮೀಡಿಯ ಫ಼ೌಂಡೇಶನ್ನಿನ ಭವಿಷ್ಯ ರೂಪಿಸುವಲ್ಲಿ ನೆರವಾಗಿರಿ. ಈ ಪ್ರಕ್ರಿಯೆಯನ್ನು ಆರಂಭಿಸುತ್ತಿದ್ದಂತೆ ನಿಮ್ಮ ಇನ್ಪುಟ್ಟನ್ನು ನಾವು ಪ್ರಶಂಸಿಸುತ್ತೇವೆ.

ನೆನಪಿಡಿ, ಎಲ್ಲಾ ಉತ್ತರಗಳು ಬಹಿರಂಗವಾಗಿ ಪ್ರದರ್ಶಿತವಾದದ್ದು ಮತ್ತು ಅವನ್ನು ನಾವು ಸಂಶೋಧನೆಯಲ್ಲಿ ಮತ್ತು ಇತರೆ ಕಾರಣಗಳಿಗೆ ಬಳಸಬಹುದು. ಆದ್ದರಿಂದ ಉತ್ತರಗಳನ್ನು ಇಲ್ಲಿ ಸಲ್ಲಿಸುವ ಮೂಲಕ ನೀವು ಅವನ್ನು ಸಾರ್ವಜನಿಕ ರಂಗದಲ್ಲಿ ಬಿಡುಗಡೆಗೊಳಿಸುತ್ತಿದ್ದೀರಿ. ದಯವಿಟ್ಟು ಖಾಸಗಿ ಮಾಹಿತಿಯನ್ನು ಇಲ್ಲಿ ನೀಡಬೇಡಿ.